सामग्री पर जाएँ

सम्भाषणम्:सामवेदः/राणायनीया

पृष्ठ की सामग्री दूसरी भाषाओं में उपलब्ध नहीं है।
विषयः योज्यताम्
विकिस्रोतः तः

ಸಾಮವೇದ ಪ್ರಶಂಸೆ: "ಸಾಮವೇದ ಏವಪುಷ್ಪಂ" ಎಂದರೆ ಧಮಱ ಅರ್ಥಕಾಮಮೋಕ್ಷಗಳಿಗೆ ಸಾಧನವಾದ ನಿತ್ಯವಾದ ವೇದ ವೃಕ್ಷಕ್ಕೆ ಸಾಮವೇದವು ಹೂವಿನಂತೆ ಸೌದಯಱವನ್ನೂ ಉಂಟುಮಾಡಿದೆ. "ವಾಚಾ ಋಗ್ರಾಸಃ ಋಚಃ ಸಾಮರಸಃ ಸಾಮ್ನ ಉದ್ಗೀಥೋರಸಃ" ವಾಂಗಿಂದ್ರೀಯವು ಪುರುಷನ ಅವಯವಗಳ ಸಾರಭೂತವಾದ ಅಂಶ , ಇದರಿಂದಲೇ ಋಕ್ ಉಚ್ಚರಿಸಲ್ಪಡುವುದರಿಂದ ಋಕ್ ವಾಗಿಂದ್ರಿಯ ಸಾರ. ಸಾಮವು ಆನಂದವನ್ನು ಕೊಡುವುದರಿಂದ ಋಕ್ಕಿನಸಾರ. ಸಾಮದ ಅವಯವವಾಗಿ ಉದ್ಗೀಥ ಓಂಕಾರವೇ ಆಗಿದ್ದು ಸಮಸ್ತ ಶಬ್ದಗಳನ್ನೂ ಒಳಗೊಂಡಿರುವುದರಿಂದಉದ್ಗೀಥ ಸಾಮರಸವಾಗಿ ಪರಮಾತ್ಮನಂತೆ ಉಪಾಸ್ಯವಾಗಿದೆ. ಇದನ್ನೆ ಭಗವಂತನ ಮಹಾವಿಭೂತಿಯೆಂದು "ವೇದಾನಾಂ ಸಾಮವೇದೋಸ್ಮಿ" ಭಗವದ್ವಾಣಿ ಘೋಷಿಸಿದೆ. ಸಾಮವೇದ ಭಾಷಾಕಾರರು: 1) ಮಾಧವ ಪಂಡಿತರು:- ಇವರ ಕಾಲ ಕ್ರಿ.ಶ. 630 ಎಂದು ಊಹಿಸಲಾಗಿದೆ.ಇವರು ಸಾಮವೇದಕ್ಕೆ ಭಾಷ್ಯ ರಚಿಸಿದ್ದಾರೆ. ಇವರು ನಾರಾಯಣನಮಗ ಎಂದು ತಿಳಿದು ಬಂದಿದೆ. ಮಾಧವರ ಭಾಷ್ಯದಲ್ಊ ಇದೇ ರೀತಿ ಛಂದಸಿಕ ವಿವರಣ ಮತ್ತು ಉತ್ತರ ವಿವರಣ ೆಂದು ಎರಡು ಭಾಗಗಳಿವೆ. 2) ಗುಣವಿಷ್ಣು:- ಇವರ ಕಾಲ 12 ನೇ ಶತಮಾನದ ಕೊನೆ ಎಂದು ಊಹಿಸಿದೆ. ಈತನು ಕೌಥುಮ ಶಾಖೆಯನ್ನನುಸರಿಸಿ ಛಾಂದೋಗ್ಯ ಮಂತ್ರ ಭಾಷ್ಯ ರಚಿಸಿದ್ದಾನೆ. ಈತನು ಬಲ್ಲಾಳಸೇನ, ಲಕ್ಷಮಣಸೇನ ಅವರ ಆಸ್ಥಾನ ಪಂಡಿತರಾಗಿದ್ದರು. 4 ವೇದಗಳ ಪ್ರಥಮ ಋಕ್ಕುಗಳಿಗೆ ಭಾಷ್ಯ ಬರೆದಿದ್ದಾರೆ. ಭರತಸ್ವಾಮಿ:- ಇವರ ಕಾಲ ಸುಮಾರು ಕ್ರಿ.ಶ. 1300 ಎಂದು ಊಹಿಸಲಾಗಿದೆ.ಇವರ ಭಾಷ್ಯ ಸಾಮವೇದದ ಎಲ್ಲಾ ಋಕ್ಕುಗಳಿಗೆ ಸಂಕ್ಷಿಪ್ತವಾಗಿದೆಯೆಂದು ಹೇಳಲಾಗಿದೆ. ಐತರೆಯ ಬ್ರಾಹ್ಮಣ, ಆಶ್ವಲಾಯನ ಸೂತ್ರಗಳಿಂದ ಉದಹರಿಸಿದ್ದಾರೆಂದು ತಿಳಿದು ಬಂದಿದೆ. 4) ಮಹಾಸ್ವಾಮೀ:- ಇವರು 13ನೇ ಶತಮಾನದವರು. ಶ್ರೀ ಆಪರ್ಟ ರವರು ರಚಿಸಿರುವ ಸೂಚೀ ಪತ್ರದಲ್ಲಿ ಇವರಿಂದ ರಚಿತವಾದ ಒಂದು ಸಾಮಭಾಷ್ಯದ ಹೆಸರಿದೆ. 5) ಸಾಯಣ:- ಇವರ ಕಾಲ ಕ್ರಿ.ಶ. 1315 - 1387. ಇವರು ಸಾಮ ಸಂಹಿತೆಗೆ ಭಾಷ್ಯ ರಚಿಸಿದ್ದಲ್ಲದೆತಾಂಡ್ಯಾದಿ ಅಷ್ಟ ಬ್ರಾಹ್ಮಣಗಳಿಗೂ ವ್ಯಾಖ್ಯಾನ ಬರೆದಿದ್ದಾರೆ. ಸಾಮವೇದ ಭಾಷ್ಯದುಪೋದ್ವಾತದಲ್ಲಿ ವೇದಲಕ್ಷಣವನ್ನು ಸೂಕ್ಷ್ಮವಾಗಿ ತಿಳಿಸಿ ಸಾಮಗಾನ ರೀತಿಗಳನ್ನುವಿವರಿಸಿದ್ದಾರೆ. ಇಲ್ಲಿ ಪೂವಱಮೀಮಾಂಸಾ ಶಾಸ್ತ್ರ ಭಾಗವನ್ನು ಉದಹರಿಸಿದ್ದಾರೆ. ಹೀಗೆ ಸಾಮಗಾನಕ್ಕೆ ಸಂಬಂಧಿಸಿದಂತೆ 62 ಪ್ರಶ್ನೆಗಳಿಗೆ ಉತ್ತರ ಸ್ಥಾಪಿಸಿದ್ದಾರೆ. 6) ಶೋಭಾಕರ ಭಟ್ಟ:- 1407 ಕ್ಕೆ ಹಿಂದೆ ಈತನು ಅರಣ್ಯಕ ವಿವರಣವೆಂಬ ಗ್ರಂಥದ ರಚನೆಗೆ ಮುಂಚೆ ಭಾಷ್ಯರಚಿಸಿರಬಹುದು. ಈತನು ನಾರದೀಯ ಶಿಕ್ಷಾಎಂಬ ವಿವರಣ ಗ್ರಂಥವನ್ನನ್ನುಸರಿಸಿ ನಾರದೀಯ ಪುರಾಣದಲ್ಲಿರುವ ಸಾಮವೇದದ ಶಿಕ್ಷಾಭಾಗವನ್ನು ಬರೆದಂತಿದೆ. ಪುಣೆಯಲ್ಲಿರುವ ಪ್ರತಿಯು 1407 ಕ್ಕೆ ಮುಂಚಿನದು. 7) ಸೂರ್ಯ ದೈವಜ್ಞ:- ಇವರ ಕಾಲ ಸುಮಾರು ಕ್ರಿ. ಶ. 1502 ಸಾಮಗಾನದ ಸ್ತೋಭಾದಿ ಲಕ್ಷ್ಮಣಗಳನ್ನು ಸಾಮಭಾಷ್ಯದಲ್ಲಿ ಹೇಳಿದೆ.ಸೂರ್ಯ ಪಂಡಿತರು ಗೀತಾಭಾಷ್ಯದಲ್ಲಿ ಸಾಮವೇದ ಸಂಬಂಧವಾದ ಅನೇಕ ಗ್ರಂಥಗಳನ್ನು ಮಂತ್ರಗಳನ್ನು ಉದಾಹರಿಸಿದ್ದಾರೆ. ಈ ವೇದಾರ್ಥವನ್ನು ರಾವಣಭಾಷ್ಯದಿಂದ ತಿಳಿದಂತಿದೆ ಸಾಮಭಾಷ್ಯದಲ್ಲಿ ಆಧ್ಯಾತ್ಮಿಕ ಅರ್ಥವನ್ನೆ ಹೇಳಿದಂತಿದೆ. ಸಾಮವೇದ ಸಂಹಿತೆಯಲ್ಲಿ ಋಕ್ (1875) ಮತ್ತು ಸಾಮ (2639) ಎಂದು ಎರಡು ಭಾಗಗಳು. ಇವುಗಳ ಪರಸ್ಪರ ಸಂಬಂಧ ಹೀಗಿವೆ. ಮೊದಲು ಋಕ್ ಸ್ತ್ರೀ ರೂಪದಲ್ಲೂ ಜೊತೆಯಲ್ಲಿದ್ದವು ಋಕ್ ಸಾಮವನ್ನು ಸಮೀಪಿಸಿ ನಾವಿಬ್ಬರೂ ದಾಂಪತ್ಯ ಬೆಳೆಸಿ ಸಂತಾನ ಪಡೆಯೋಣವೆಂದಿತು. ಸಾಮ ಸಾಧ್ಯವಿಲ್ಲ ನನ್ನ ಮಹಿಮೆ ನಿನಗಿಂತ ಅಧಿಕ ೆನ್ನಲು ಋಉಕ್ ಮೊದಲಿಗಿಂತಲೂ ಎರಡರಷ್ಟು ಬೆಳೆಯಿತು. ಮತ್ತೆ ದಾಂಪತ್ಯ ಬೆಳೆಸಲು ಸಾಮವನ್ನು ಕೇಳಿತು ಅದಕ್ಕೂ ಸಾಮ ಒಪ್ಪಲಿಲ್ಲ ಈಗ ಋಕ್ ಮೊದಲಿಗಿಂತಲೂ ಮೂರರಷ್ಟು ಬೆಳೆದು ಕೇಳಿಕೊಳ್ಳಲು ಸಾಮವು ಋಕ್ನೊಂದಿಗೆ ದಾಂಪತ್ಯ ಬೆಳೆಸಲು ಒಪ್ಪಿತು. ಆದ್ದರಿಂದ ಪುರುಷರಿಗೆ ಬಹುಪತ್ನಿತ್ವ ರೂಢಿಗೆ ಬಂದರೂ ಸ್ತ್ರೀಯರು ಬಹು ಪತಿತ್ವ ಹೊಂದಲಾಗುವುದಿಲ್ಲ. ಮೂರು ಋಕ್ಕುಗಳಿಂದ ಸ್ತುತಿಸಿತ್ತಾರೆ. ಹೀಗೆ ಋಕ್ಕುಗಳೊಂದಿಗೆ ಸಾಮವು ಬೆರೆತದ್ದರಿಂದ ಮೂರು ಋಉಕ್ಕುಗಳಿಂದ ಸ್ತುತಿಸುತ್ತಾರೆ. ಹೀಗೆ ಋಕ್ಕು ಸಾಮ ಎರಡೂ ಸೇರಿದ್ದರಿಂದಲೇ ಸಾಃಅಮ ಸಾಮವೆಂಬ ಹೆಸರು ಪ್ರಸಿದ್ಧವಾಯಿತು.ಋಕ್ಕನ್ನು ಪತ್ನಿಯೆಂದು ಸಾಮವನ್ನು ಪತಿಯೆಂದು ಶತಪಥಬ್ರಾಹ್ಮಣ ಹಾಗೂ ಛಾಂದೋಗ್ಯದಲ್ಲಿ ತಿಳಿಸಿದೆ. ಸ್ತೋಭಪಾಠ - ಸ್ತೋಭ ಪದಪಾಠ: ಅಧಿಕಶ್ಚ ವಿವರ್ಣಶ್ಚ ಜೈಮಿನಿಃ ಸ್ತೋಭಶಬ್ದತ್ವಾತ್ ಇತಿ ಋಗಕ್ಷರೇಭ್ಯಃ ಋಗಾರ್ಥಾಭಿ ಧಾನೋಪಯೋಗಿಭ್ಯ ಻ಧಿಕಂ ಋಗಾಕ್ಷರಂ ವಿಲಕ್ಷಣಂಚ ತಾದೃಶ ವರ್ಣಂ ಸ್ತೋಭಶಬ್ದ ವಾಚ್ಯಂ ಜೈಮಿನಿ ಮನ್ಯತೇ. ಸಾಮಗಾನಾವರಸದಲ್ಲಿ ಗಾನಸಾಧನವಾಗಿಯೂ ಋಗ್ವ್ಯತಿರಕ್ತವಾಗಿಯೂ ಇರುವ ಅಧಿಕವರ್ಣವೇ ಸ್ತೋಭ ಎಂಬ ಸಂಜ್ಞೆಯನ್ನು ಪಡೆದಿದೆ. ಸಾಮಗಾನದ ಅವಯುವಗಳು ಮತ್ತು ಸಾಮಗಾಯಕರು: "ಯಜ್ಞೋಹಿ ಶ್ರೇಷ್ಠತಮಂಕರ್ಮ" ಪ್ರಪಂಚದಲ್ಲಿ ಯಜ್ಷವೇ ಶ್ರೇಷ್ಠತಮವಾದ ಕರ್ಮ ವೇದಮಂತ್ರಗಳಿಗೆ ಯಜ್ಞವೇ ವಿನಿಯೋಗ. "ಯಜ್ಞಂ ವ್ಯಾಖ್ಯಾಸ್ಯಾಮಃ| ಸತ್ರಯ್ಯಾ ವಿಧಿಯತೇ|| ಯಜ್ಞವು ಮೂರು ವೇದಗಳಿಂದ ಅನುಷ್ಠಾನವಾಗತಕ್ಕದ್ದು. "ಸೋಮೇವ ವೇದತ್ರಯವಿದಾಂ ಷೋಡಶ ಋತ್ವಿಜಾಮುಪಯೋಗಃ| ಸೋಮಯಾಗದಲ್ಲೇ ಮೂರು ವೇದಗಳ ಪರಿಣಿತರಾದ 16 ಜನ ಋತ್ವಿಜರು ಭಾಗವಹಿಸುವುದು. ಇವರನ್ನು ಋಗ್ವೇದೀಯಾಃ ಹೋತೃಗಣಾಃ ಯಜುರ್ವೇದೀಯಾ: ಅಧ್ವರ್ಯುಗಣಾಃ ಸಾಮವೇದೀಯಾಃ ಉದ್ಗಾತೃಗಣಾಃ ಬ್ರಹ್ಮಗಣಾಃ ಎಂದು ನಾಲ್ಕು ನಾಲ್ಕು ಜನರ ನಾಲ್ಕು ಗಣಗಳಾಗಿ ಪರಿಗಣಿಸಲಾಗಿದೆ. ಸಪ್ತ ತನ್ತ್ರಾತ್ಮಕವಾದ ಊಹ ರಹಸ್ಯ ಸಾಮಗಳ ವಿವರ ಕೆಳಗೆ ಕಂಡಂತಿದೆ. ಸಾಮವೇದದಲ್ಲಿನ ೊಟ್ಟ್ಉ ಸಾಮಸಂಖ್ಯೆಗಳು ಪ್ರಕೃತಿಸಾಮ - 1494 ಊಹಸಾಮ - 926 ರಹಸ್ಯಸಾಮ - 209 ಒಟ್ಟು ಸಾಮಗಳು - 2639 ವೇದವಾಙ್ಮಯ--> 1) ಋಗ್ವೇದ 2) ಯರ್ಜುವೇದ 3) ಸಾಮವೇದ 4) ಅಥರ್ವಣ ವೇದ ಸಾಮವೇದ ---> 1) ಸಂಹಿತೆ 2) ಬ್ರಾಹ್ಮಣ 3) ಉಪನಿಷತ್ 4) ವೇದಾಂಗಗಳು ಸಂಹಿತೆ---> 1) ಅರ್ಚಿಕ (ಋಕ್) 2) ಗಾನ (ಸಾಮ) ಅರ್ಚಿಕ (ಋಕ್) ---> 1) ಪೂರ್ವಾಚಿಕ 2) ಮಹಾನಾಮ್ನೀ 3) ಉತ್ತರಾರ್ಚಿಕ ---> ಪದ ---> 1) ಛಂದಃಪದ 2) ಸ್ತೋಭಾಪದ ಗಾನ (ಸಾಮ) ---> 1) ಪ್ರಕೃತಿ 2) ವಿಕೃತಿ ಪ್ರಕೃತಿ --> 1) ಗ್ರಾಮೇಗೆಯ 2) ಅರಣ್ಯಗೇಯ ---> ಸಪ್ತಗಾನಾತ್ಮಕ ವಿಕೃತಿ --> 1) ಊಹಗಾನ (ಗ್ರಾಮೇಗೇಯಸ್ಯ) 2) ರಹಸ್ಯಗಾನ (ಅರಣ್ಯಸ್ಯ ಊಹ) ---> ಸಪ್ತತಂತಾತ್ಮಿಕ ಬ್ರಾಹ್ಮಣಗಳು - 1) ತಾಂಡ್ಯ ಮಹಾಬ್ರಾಹ್ಮಣ, 2) ಷಡ್ವಿಂಶ ಬ್ರಾಹ್ಮಣ, 3) ಸಾಮವಿಧಾನ ಬ್ರಾಹ್ಮಣ, 4) ಆರ್ಷೇಯ ಬ್ರಾಹ್ಮಣ, 5) ದೇವತಾಧ್ಯಾಯ, 6) ಉಪನಿಷತ್ ಬ್ರಾಹ್ಮಣ, 7) ಸಂಹಿತೋಪನಿಷತ್ ಬ್ರಾಹ್ಮಣ, 8) ವಂಶ ಬ್ರಾಹ್ಮಣ ಉಪನಿಷತ್ತುಗಳು - ಛಾಂದೋಗ್ಯ, ಕೇನ (ಪ್ರಧಾನವಾಗಿ) ಮಹೋಪನಿಷತ್, ಜಾಬಾಲ್ಯುಪನಿಷತ್, ಆರುಣಿಕೋಪನಿಷತ್, ಜಾಬಾಲದಶಱನೋಪನಿಷತ್. ವೇದಾಂಗಗಳು - ಶಿಕ್ಷಾ ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ. 1) ಶಿಕ್ಷಾ: ಪಾಣಿನೀಯ ಶಿಕ್ಷಾ, ನಾರದಶಿಕ್ಷಾ, ಗೌತಮಶಿಕ್ಷಾ, ಲೋಮಶ ಶಿಕ್ಷಾ. 2) ವ್ಯಾಕರಣ: ಪ್ತಾತಿಶಾಖಾ ಲಕ್ಷ್ಮಣಗ್ರಂಥಗಳು, ಗಾಯತ್ರ್ಯವಿಧಾನಂ, ಋಕ್ ತನ್ತ್ರಂ, ಲಘು ಋಕ್ ತನ್ತ್ರವಿವೃತಿ, ಅಕ್ಷರ ತನ್ತ್ರಂ, ಸಾಮತನ್ತ್ರಂ, ಸಾಮತಂನ್ತ್ರ 3) ಛಂದಸ್ಸು : ಪರಿಭಾಷಾ ಸಂಗ್ರಹ, ಸಾಮವೇದ ಸಪ್ತ ಲಕ್ಷಣಂ, ಪುಲ್ಲ ಸೂತ್ರಂ, ಆರ್಺ಏಯದೀಪಿಕಾ, ನೈಗಂ, ಸ್ತೋಂಬಾನು ಸಂಹಾರಃ, ಮಾತ್ರಾ ಲಕ್ಷಣಂ, ಆರ್ಚಿಕ ಲಕ್ಷಣಂ, ಆರ್ಚಿಕ ಛಲಾಕ್ಷರಂ, ಪದ ಛಲಾಕ್ಷಾರಂ, ಪ್ರಕೃತಿಸಾಮ ಛಲಾಕ್ಷರಂ, ಪ್ರಕೃತಿಸಾಮ ಛಲಾಕ್ಷರಂ, ಛಲಪ್ರಕ್ರಿಯಾ, ಛಲಾಕ್ಷಾರ ಕಾರಿಕಾ, ಸಾಮಪ್ರಕಾಶನಮ್, ರಾವಣ ಭೇಂಟ್, ನೀತಿಕಲ್ಪ....ಇತ್ಯಾದಿ. 4) ನಿರುಕ್ತ : 5) ಜ್ಯೋತಿಷ : ಎಲ್ಲಾ ವೇದಗಳಿಗೂ ಸಾಮಾನ್ಯವಾದಂಥ ವೇದಾಂಗಗಳು ಕಲ್ಪಸೂತ್ರಗಳು : ಮೂರುಬಗೆ - (ಅ) ಶ್ರೌತಸೂತ್ರ :- ದ್ರಾಹ್ಯಾಯಣ, ಻ನುಪದ, ನಿದಾನ, ಉಪನಿದಾನ ಮಶಕ ಕಲ್ಪ, ಉಪಗ್ರಂಥ ಕ್ಷುದ್ರ, ತನ್ದಾ(ತಾಂಡ್ಯ) ಲಕ್ಷಣಂ, ಪಂಚಾವಿಧಕಲ್ಪಾನುಪದ, ಅನುಸ್ತೋತ್ರಂ, ಆರ್ಷೇಯಕಲ್ಪ, ಶ್ರೌತ ಪ್ರಯೋಗ, ಪುರುಷೋತ್ತಮ ಭಟ್ಟಿಯಂ, ಶ್ರೀನಿವಾಸ ದೀಕ್ಷಿತೀಯಂ, ಶ್ರೌತಕಾರಿಕಾ....ಇತ್ಯಾದಿ. (ಆ) ಧರ್ಮಸೂತ್ರಗಳು:- ಗೌತಮಧರ್ಮಸೂತ್ರ, ಗೌತಮ ಸ್ಮೃತಿ, ಗೌತಮಸೂತ್ರ ಪರಿಶಿಷ್ಟ (ಇ) ಗೃಹ್ಯಸೂತ್ರಗಳ: ದ್ರಾಹ್ಯಾಯಣ ಗೃಹ್ಯಸೂತ್ರ, ಖಾದಿರಗೃಹ್ಯಸೂತ್ರ, ಗೋಭಿಲ ಗೃಹ್ಯಸೂತ್ರ, ಕೌಥುಮಗೃಹ್ಯಸ್ಮಾರ್ತ ಪ್ರಯೋಗ ವಾಮನಕಾರಿಕಾ, ಶಾಟ್ಯಾನಕಾರಿಕಾ, ಶೈಯ್ಯಾಪ್ರಯೋಗಃ, ಸ್ಮಾರ್ತ ತಂತ್ರಸುಧಾನಿಧಿ, ಪ್ರಯೋಗ ಕುಸುಮಾಂಜಲಿ, ಅಪರಕಾರಿಕಾ, ಅಪರಸೂತ್ರ, ಶ್ರಾದ್ಧಪ್ರಯೋಗ, ಗೃಹ್ಯಪರಿಶಿಷ್ಟ, ಪ್ರಯೋಗಮಣಿದರ್ಪಣ, ಸಾಮ್ನಾಹ್ನಿಕ ಸಂಗ್ರಹ, ಸಂಧ್ಯಾಸೂತ್ರ..... ಇತ್ಯಾದಿ. ತಾಂಡ್ಯ ಮಹಾ ಬ್ರಾಹ್ಮಣ :- ತಂಡಿನ ಮಹರ್ಷಿಗಳು ದರ್ಶಿಸಿರುವದರಿಂದ ಈ ಹೆಸರು. ಅಷ್ಟಬ್ರಾಹ್ಮಣಗಳಲ್ಲಿ ಗಾತ್ರ ಹಾಗೂ ವಿಷಯಗಳ ದೃಷ್ಟಿಯಿಂದಲೂ ಮಹತ್ವದಾಗಿರುವುದರಿಂದ ಇದನ್ನು ಮಹಾಬ್ರಾಹ್ಮಣವೆಂದು ಕರೆಯುತ್ತಾರೆ. ಇದರಲ್ಲಿ 25 ಅಧ್ಯಾಯಗಳಿರುವುದರಿಂದ ಪಂಚವಿಂಶ ಬ್ರಾಹ್ಮಣವೆಂಬ ಅಭಿದಾನವಿದೆ. ಪ್ರೌಢವಿಚಾರಗಳೂ ಅನೇಕ ಯಾಗಗಳ ವಿಧಿವಿಧಾನಗಳೂ ಈ ಗ್ರಂಥದ ತಿರುಳಾಗಿರುವುದರಿಂದ ಫ್ರೌಢ ಬ್ರಾಹ್ಮಣವೆಂಬ ಸಂಕೇತವೂ ಚಾಲ್ತಿಯಲ್ಲಿದೆ. ಆಪಸ್ತಂಭ ಶ್ರೌತಸೂತ್ರಕಾರರು "ಇತಿ ಛಂದೋಗ ಬ್ರಾಹ್ಮಣಂ ಭವತಿ (10-13-35), ಇತಿ ತಾಂಡ್ಯಕಂ (21-16)ಎಂದು ಉಲ್ಲೇಖಿಸಿರುವುದರಿಂದ ಇದರ ಪ್ರಾಚೀನತೆಯನ್ನೂ ಈ ಶ್ರೇಣಿಯ ಗ್ರಂಥಗಳಲ್ಲಿ ಇದು ಪ್ರಮಾಣಭೂತವಾಗಿರುವುದನ್ನು ತಿಳಿಸುತ್ತದೆ. ಸಾಯಣ ಭಾಷ್ಯ ಸಹಿತವಾದ ಈ ಗ್ರಂಥವನ್ನು ಕಾಸಿಯಲ್ಲಿರುವ ಚೌಖಂಬಾ ಸಂಸ್ಕೃತ ಪುಸ್ತಕಾಲಯದವರು ದೇವನಾಗರಿ ಲಿಪಿಯಲ್ಲಿ ಮುದ್ರಿಸಿ ಪ್ರಕಟಿಸಿದ್ದಾರೆ. ಉಪನಿಷತ್ತುಗಳು.:- ಅಮತತ್ವಕ್ಕೆ ಏರಲು ಮರ್ತ್ಯ ಲೋಕದಿಂದ ನಿರ್ಮಿಸಿದ ಸೋಪಾನಗಳೇ ಉಪನಿಷತ್ತುಗಳು. ವೇದಗಳಲ್ಲಿ ಮನ್ತ್ರ ಮತ್ತು ಬ್ರಾಹ್ಮಣಾನಂತರ ಬರುವ ಜ್ಞಾನ ಭಾಗವೇ ಉಪನಿಷತ್ . ದೇಶ ಕಾಲ ನಿಮಿತ್ತಗಳಿಂದ ಅತೀತವಾಗಿರುವ ಮಹಾಮಹಿಮರು ಅನುಭವಿಸಿರುವ ಸತ್ಯವೇ ಇಲ್ಲಿ ಘನೀಭೂತವಾಗಿ ಪ್ರಕಾಶಿಸುತ್ತಾ ೆಲ್ಲಾ ಕಾಲಕ್ಕು ಅವಶ್ಯಕವಾದ ಪ್ರಶಸ್ತ ಮಾರ್ಗಗಳನ್ನು ತೋರಿಸುತ್ತದೆ. ಎಲ್ಲಿಯೂ ಅಲ್ಪತನದ ಸುಳಿವಿಲ್ಲ. ಎಲ್ಲವೂ ಭೂಮವೆ ಬ್ರಹ್ಮವೇ. ಈ ದಿವ್ಯವಾದ ದೇವ ಗಂಗೆಯಲ್ಲಿ ಮಿಂದವರೆಲ್ಲಾ ಪಾವನವಾಗುತ್ತಿದ್ದಾರೆ ಇಂದೂ ಸಹ. ಸಾಮವೇದದಲ್ಲಿ ಛಂದಸ್ಸಿಗಿರುವ ಪ್ರಾಮುಖ್ಯತೆಯಿಂದ ಖುಷಿ ಚನ್ದಸ್ಸು ದೇವತೆ ಹೇಳುವ ಕ್ರಮವಿದೆ. ಅಂದರೆ ಬೇರೆ ವೇದಗಳಲ್ಲಿ ಛಂದಸ್ಸನ್ನು ದೇವತೆ ಹೇಳಿದ ನಂತರ ಹೇಳುತ್ತಾರೆ. ಆದರೆ ಸಾಮವೇದದಲ್ಲಿ ಋಷಿ ಮತ್ತು ದೇವತೆಗಳ ಮಧ್ಯೆ ಛಂದಸ್ಸು ಪ್ರತಿಷ್ಠಿತವಾಗಿ ವಿರಾಜಿಸುತ್ತದೆ. ನಿರುಕ್ತ:- ವೇದ ಪುರುಷನಿಗೆ ನರುಕ್ತ ಶಾಸ್ತ್ರವು ಶೂತ್ಪ್ರಾಯವಾಗಿದೆ. "ಅರ್ಥಾವಬೋಧೇ ನಿರಪೇಕ್ಷತಾಯಾ ಪದ ಜಾತಂ ಯಂತ್ರೋಕ್ತಂತನ್ನಿರುಕ್ತಂ" ವೇದಾರ್ಥ ತಿಳಿಸಲು ಮತ್ತಾವ ಸಹಾಯವೂ ಇಲ್ಲದೆ ಉಪಯುಕ್ತವಾದ ಪದಗಳನ್ನು ತಿಳಿಸುವ ಗ್ರಂಥ. ಜ್ಯೌತಿಷಃ:- ವೇದ ಪುರುಷನ ನೇತ್ರಸ್ಥಾನೈವಾದ ಈ ಶ್ರಾಸ್ತ್ರ ವೇದ ವಿಹತ ಕರ್ಮಾಚರಣೆಗೆ ಅತ್ಯಂತ ಅನಿವಾರ್ಯವಾಗಿದೆ. ವೇದಹಿ ಯಜ್ಞಾರ್ಥ ಮಭಿಪ್ರವೃತ್ತಾ ನಿರ್ದಿಷ್ಟ ಕಾಲಾ ವಿಹಿತಾಶ್ಚಯಜ್ಞಾಃ| ತಸ್ಮಾದಿದಂ ಕಾಲ ವಿದಾನ ಶಾಸ್ತ್ರಂಯೋ ಜ್ಯೋತಿಷಂ ವೇದ ಸ ವೇದಯಜ್ಞಿನ್|| ಕಲ್ಪ:- ವೇದ ಪುರುಷನ ಹಸ್ತವನ್ನೇ ಕಲ್ಪಕ್ಕೆ ಹೋಲಿಸಿವೇದದ ಫಲಗಳ ಭೋಗಸಾಧನವಾದದ್ದು ಕಲ್ಪ ಎಂದು ತಿಳಿಸಿದ್ದಾರೆ. ಕಲ್ಪೋ ವೇದ ವಿಹಿತಾನಾಂ ಕರ್ಮಣಾಮ್ ಅನುಪೂರ್ವೇಣ ಕಲ್ಪನಾ ಶಾಸ್ತ್ರಂ ಎಂದು ಋಕ್ ಪ್ರಾತಿಶಾಖ್ಯೆಯ ವರ್ಗದ್ವಯ ವೃತ್ತಿಯಲ್ಲಿ ವಿಷ್ಣುಮಿತ್ರರು ಹೇಳಿದ್ದಾರೆ. 1) ದ್ರಾಹ್ಯಾಯಣಶ್ರೌತ ಸೂತ್ರ:- ತಾಂಡ್ಯ ಬ್ರಾಹ್ಮಣಾನುಸಾರ ಸರ್ವಯಾಗಗಳನ್ನು ನಿರೂಪಿಸುವುದರಿಂದಲೂ, ಔದ್ಗಾತೃ ಧರ್ಮವನ್ನು ಸಮಗ್ರವಾಗಿ ಉಪದೇಶಿಸಿರುವುದರಿಂದಲೂ ಈ ಗ್ರಂಥಕ್ಕೆ ಸಾಮವೇದದಲ್ಲಿ ಪ್ರಥಮ ಸ್ಥಾನವಿದೆ. ಆದ್ದರಿಂದಲೇ ಕೌಥುಮಶಾಖಾಧ್ಯಾಯಿಗಳಿಗೆ "ದ್ರಾಹ್ಯಾಯಣ ಸೂತ್ರಿಣಃ" ಎನ್ನುವುದು ದ್ರಾಹ್ಯಾಯಣ ಮಹರ್ಷಿಗಳಿಂದ ಪ್ರಣಿತವಾಗಿರುವುದರಿಂದಲೇ ಈ ಗ್ರಂಥದ್ರಾಹ್ಯಯಣ ಶೌತಸೂತ್ರವೆಂಬ ಹೆಸರು ಪಡಿದಿದೆ.

ಲಾಟ್ಯಾಯನ ಶೌತಸೂತ್ರ:-

ದ್ರಾಹ್ಯಾಯಣ ಸೂತ್ರವನ್ನೇ ಆಮೂಲಾಗ್ರವಾಗಿ ಅನುಸರಸಿರುವ ಈ ಗ್ರಂಥ ಮುದ್ರಿತವಾಗಿದ್ದು ಉತ್ತರ ದೇಶಿಯ ಛಂದೋಗರಿಗೆ ಪ್ರಾಮಾಣಿಕಶ್ರೌತ ಗ್ರಂಥವಾಗಿದೆ. ಜೈಮಿನಿಶ್ರೌತ ಸೂತ್ರ ಎಂಬಗ್ರಥವೂ ಉಪಾದೇಯವೆಂದು ತಿಳಿದುಬರುತ್ತದೆ. 2) ಅನುಪದ ಸೂತ್ರಂ: ದಶಪ್ರಪಾಠಕಗಿಂಧ ಕೂಡಿರುವ ಈ ಗ್ರಂಥ - ವಿಕ್ರಮಶಕೆ 1638ರಲ್ಲಿ ಪುರುಷೋತ್ತಮ ಎಂಬುವವರು ಪ್ರಾಚೀನ ನಾಗರೀಲಿಪಿಯಲ್ಲಿ ಬರೆದಿದ್ದು ವಾರಾಣಸೀ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿದೆ. ಜರ್ಮನಿಯಲ್ಲಿ ಮುದ್ರಿತವಾಗಿದೆಯೆಂದು ತಿಳಿದುಬಂದಿದೆ. ಸಾಮವೇದಿಗಳು ಉಪಾಕರ್ಮದಲ್ಲಿ ವೇದಾರಂಭ ಕಾಲದಲ್ಲಿ ದ್ರಾಹ್ಯಾಯಣ ಸೂತ್ರಾನಂತರ ನಿದಾನ ಸೂತ್ರ ವಾಕ್ಯ ವನ್ನುಪಠಿಸುತ್ತಿದ್ದರೆ. ಈಗ ಈ ಗ್ರಂಥವೂ ದೊರೆತಿದೆ. 3) ನಿದಾನ ಸೂತ್ರಂ: ಈ ಗ್ರಂಥಪತಂಜಲಿ ಮಹರ್ಷಿಗಳಿಂದ ಪ್ರಣೀತವಾದದ್ದು. ಏಳುಖಂಡಗಳಿಂದ ಕೂಡಿದ ೀ ಗ್ರಂಥಕ್ಕೆ ತಾತಪ್ರಸಾದ ೆಂಬುವರು ತತ್ವಬೋಧಿನಿ ಎಂಬ ವಾಖ್ಯಾನ ಬರೆದಿದ್ದಾರೆ. ಋಷಿಕೇಶ ಶರ್ಮ ೆಂಬುವರೂ ವ್ಯಾಖ್ಯಾನಿಸಿದ್ದಾರೆ. 4) ಉಪನಿದಾನಂ 5) ಕಲ್ಪ ಸೂತ್ರ 6) ಉಪಗ್ರಂಥಸೂತ್ರ 7) ಕ್ಷುದ್ರ ಕಲ್ಪ ಸೂತ್ರ 8) ತನ್ದಾ (ತಾಂಡ್ಯ) 9) ಪಂಚವಿಧಸೂತ್ರಂ 10) ಕಲ್ಪಾನು ಪದಂ 11) ಅನುಸ್ತೋತ್ರಂ ಧರ್ಮಸೂತ್ರಗಳು:- ಚತುರ್ವರ್ಣ ಚತುರಾಶ್ರಮಗಳಿಗೆ ವಿಹಿತವಾದ ಸಾಮನ್ಯ ಜನರೂ ಸಮಷ್ಟ ಸಮಾಜದ ುನ್ನತಿಗಾಗಿ ಆಚರಿಸಬೇಕಾದ ಸಾಮಾನ್ಯ ಧರ್ ನಿಯಮಗಳನ್ನು, ಅನುಷ್ಠಾನ ಕ್ರಮಗಳನ್ನು ಬೋಧಿಸುತ್ತವೆ. ಗೌತಮ ಧರ್ಮಸೂತ್ರ: ಇದು ಕ್ರಿ.ಪೂ. 500 ಕ್ಕೂ ಹಿಂದಿನದು. ರಾಣಾಯಿನೀ ಶಾಖೆಗೆ ಸಂಬಂಧಿಸಿದ ಗ್ರಂಥವಿದು. ಗೌತಮ ಮಹರ್ಷಿಗಳಿಂದ ಪ್ರಣೀತವಾದ ೀಈಗ್ರಂಥ 3 ಾಆಧ್ಯಾಯ ಅಥವಾ ಪ್ರಶ್ನೆ ಅಥವಾ ಪಟಲಗಳಿವೆ. ಹರದತ್ತ ಕೃತ ಮಿತಾಕ್ಷರವೃತ್ತಿ ಸಹಿತ ಪುಣೆ ಆನನ್ದಾಶ್ರಮದವರೂ, ಮಸ್ಕರೀ ವ್ಯಾಖ್ಯಾ ಸಹಿತ ಮೈಸೂರಿನವರೂ ಮುದ್ರಿಸಿದ್ದಾರೆ. ಈ ಗ್ರಂಥದಲ್ಲಿ ಅನ್ಯ ಸೂತ್ರಗಳಲ್ಲಿ ಕಂಡು ಬರದಿರುವ ಕೆಲವು ಧರ್ಮ ನಿಯಮಗಳನ್ನು ಬೋಧಿಸಿ ಸ್ಪಷ್ಟೀಕರಿಸುತ್ತದೆ. ಹೀಗಾಗಿ ಸಾಮವೇದಿಗಳಿಗೆ ಇದು ವಿಶಿಷ್ಟ ಗ್ರಂಥ. ವಿಷಯಗಳು ಸಂಕ್ಷೇಪವಾಗಿವೆ. ಗೌತ ಮಸೂತ್ರ ಪರಿಶಿಷ್ಟ: ಪರಿಶಿಷ್ಟ ಸೂತ್ರಗಳು ಸೂತ್ರಗ್ರಂಥಗಳಲ್ಲಿ ಬಿಟ್ಟಿರುವ ಯಜ್ಞಯಾದಿಗಳ ಸೂಕ್ಷ್ಮ ವಿಷಯಗಳನ್ನು ಬೋಧಿಸುತ್ತವೆ. ಗೌತಮ ಸೃಷ್ಟಿ: 14 ಅಧ್ಯಾಯಗಳಲ್ಲಿ 506 ಶ್ಲೋಕಗಳನ್ನೊಳಗೊಂಡಿರುವ ೀಈಗ್ರಂಥಲ್ಲಿ ನಾರದ ಗೌತಮರು ಜಿಜ್ಞಾಸೆ ಮಾಡಿರುವ ಧಮಱಗಳ ಬೋಧನೆ ಇದೆ. ಗೃಹ್ಯ ಸೂತ್ರಗಳು: ಗೃಹಸ್ತ ತನ್ನ ಅಭ್ಯುದಯ ನಿಶ್ಖ್ರೇಯಸ್ಸುಗಳಿಗೆ ಆಚರಿಸಬೇಕಾದ ಈ ಗೃಹ್ಯ ಕರ್ಮಗಳಿಗೆ ಅಗತ್ಯ ವಾದವಿಧನಿಯಮಗಳನ್ನು ಋಊಪಿಸುವ ಭವ್ಯವಾದ ಸುವರ್ಣಚೌಕಟ್ಟೇ ಗೃಹ್ಯ ಸೂತ್ರಗಳು. ದ್ರಾಹ್ಯಾಯಣ ಗೃಹ್ಯಸೂತ್ರ - ಖಾದಿರ ಗೃಹ್ಯ ಸೂತ್ರ: ದ್ರಾಹ್ಯಾಯಣ ಶೌತ್ರ ಸೂತ್ರದ ವಿಷಯ ತಿಳಿಸುವಾಗ ಹೇಳಿರುವಂತೆ ದ್ರಾಹ್ಯಾಯಣರೂ ಖಾದಿರರೂ ಒಬ್ಬರೆ ಎಂದು ಊಹಿಸಲಾಗಿದೆ. ಗೋಭಿಲ ಗೃಹ್ಯ ಸೂತ್ರ : ಉತ್ತರದೇಶ ಕೌಥುಮಶಾಖೆಯವರು ಈ ಸೂತ್ರವನ್ನುನುಸರಿಸುತ್ತಾರೆ. ಅಪರ ಕಾರಿಕಾ:

9 ನೇ ಖಂಡಗಳ ಈ ಕೃತಿ ಮುದ್ರಿಸಲ್ಪಟ್ಟಿರುತ್ತದೆ. ಸೂತ್ರಾನುಸಾರ ಪ್ರಯೋಗವನ್ನು ವಿಶದಪಡಿಸುತ್ತದೆ. ಮೃತದೇಹ ಸಂಸ್ಕಾರ, ಸಪಿಂಡಾನ್ತ್ಯವಾಗಿ ವಿಷಯಗಳಿವೆ.

ಶಾಟ್ಯಾನ ಕಾರಿಕಾ ಶ್ರೀಕೃಷ್ಣಸ್ವಾಮಿಗಳು ಮುದ್ರಿ ಸಿ ಪ್ರಟಟಿಸಿದ್ದಾರೆ. 30 ಖಂಡಗಳ ಈ ಗ್ರಂಥ ದ ಕರ್ತುವಿನಹರು ಲಭ್ಯವಿಲ್ಲ. ಕೌಥುಮ ಗೃಹ್ಯಂ: 21 ಖಂಡಗಳ ಈಗ್ರಂಥವನ್ನು ಡಾ. ಸೂರ್ಯಕಾಂತ ಮಹಾಶಯರು ಏಷಿಯಾಟಿಕ ಸೊಸೈಟಿ, ಕಲ್ಕತ್ತಾ ಇವರತಿಯಿಂದ 1956 ರಲ್ಲಿ ಪ್ರಕಟಿಸಿದ್ದಾರೆ. ಅಕ್ಷರ ತಂತ್ರ: ಸಂಜ್ಞಾ ಲಕ್ಷ್ಮಣವೆಂದುಮೇಲಿನ ಸಾಮತಜ್ಞ ಗ್ರಂಥದ 14 ಮತ್ತು 15 ನೇ ಪ್ರಪಾಠಕಗಳೆಂದು ಗುರುತಿಸಲಾಗಿದೆ. ಸಾಮತಂತ್ರ ಪ್ರಕಾಶಿಕ: ಈ ಪುಸ್ತಕೆಯನ್ನು ಮಹಾಗಣಪತಿಗಳೆಂಬುವವರು ರಚಿಸಿದ್ದಾರೆ. ಸಾಮತನ್ತ್ರ, ಭಾಷ್ಯವನ್ನು ಉದಾಹರಣೆ ಸಹಿತ ವಿವರಿಸಲಾಗಿದೆ. ಸಾಮತನ್ತ್ರ ಸಂಗ್ರಹ - ಸಾಮತಂತ್ರ ಪೋತಮ್: ವಾಛಿನಾಥ ಎಂಬುವವರ ರಚನೆಯಾಗಿದೆ. ಪಕೃತಿಗಾನದ"ಓಗ್ನಾ ಇ" ಪ್ರಥಮ ಸಾಮದಿಂದ "ಉನ್ನಯಾಮಿ" ಅಂತ್ಯಸಾಮದವರೆಗೆ, ಪ್ರತಿಸಾಮವನ್ನು ಆಯಾಸೂತ್ರಗಳೊಂದಿಗೆ ಸಮನ್ವಯಮಾಡಿ ವಿವರಿಸಿದ್ದಾರೆ. ಪುಲ್ಲ ಸೂತ್ರಮ್ - ಪುಷ್ಪ ಸೂತ್ರಮ್: 129 ಖಂಡಗಳನ್ನೋಳಗೊಂಡ 10 ಪ್ರಪಾಠಕಗಳ ಪುಸ್ತಕೆ ಇದು. ಆರ್ಪೇಯ ದೀಪಿಕಾ: ಈ ಗ್ರಂಥವನ್ನು ಡಾ. ಬಿ. ಆರ್. ಶರ್ಮಾರು ಟಿಪ್ಪಣಿ, ಅನುಕ್ರಮಣಿಕಾ ವಿಮರ್ಶೆಗಳೊಂದಿಗೆ ಸಂಪಾದಿಸಿ ತಿರುಪ಻ತಿ ಕೇಂದ್ರೀಯ ಸಂಸ್ಕೃತ ವಿದ್ಯಾಪೀಠದಿಂದ ಪ್ರಕಟಿಸಿದ್ದಾರೆ. ನೈಗಮ್- ನೈಗೇಯಾರ್ಚಿಕಾ: ಆರ್ಷೇಯದೀಪಿಕಾದಲ್ಲಿ ಪಕೃತಿಸಾಮಗಳ ಋಷಿಗಳನ್ನು ಮಾತ್ರ ತಿಳಿಸಿದ್ದರು. ಈ ಪುಸ್ತಕದಲ್ಲಿ ಪೂರ್ವಾರ್ಚಿಕ ಉತ್ತರಾರ್ಚಿಕಗಳ ಸಮಸ್ತ ಋಕ್ ಮತ್ತು ಸಾಮಗಳ ಋಷಿ ಹಾಗೂ ದೆವತೆಗಳನ್ನು ಪ್ರತ್ಯೇಕವಾಗಿ ತಿಳಿಸುತ್ತದೆ. ಸಾಮ ವೇದ ಸಪ್ತ ಲಕ್ಷ್ಮಣಂ: ಆರ್ಚಿಕಗಳ ಲಕ್ಷ್ಮಣಗ್ರಂಥವಾದ ಇದರಲ್ಲಿ 138 ಶ್ಲೋಕಗಳನ್ನು ಒಳಗೊಂಡು 7 ಪ್ರಕರಣಗಳಿವೆ.ಅದ್ವೈತಿಗಳಾದ ನಾರಾಐಣ ಪಂಡಿತರು ರಚಿಸಿದ್ದಾರೆ. ಸ್ವರಪ್ರಕ್ರಿಯೆ: ಸಾಮವು ಋಕ್ಕನ್ನುನುಸರಿಸಿದ್ದರೂ ಗಾನಕ್ಕೆ ಅನುಕೂಲವಾಗುವಂತೆ ಋಕ್ಕನ್ನು ಸ್ವಲ್ಪ ವ್ಯತ್ಯಾಸ ಮಾಡಬೇಕಾಗುತ್ತದೆ. ಈ ವ್ಯತ್ಯಾಸಗಳನ್ನು ವಿಕಾರಗಳೇಂದು ಕರೆಯುತ್ತಾರೆ. ವಿಕಾರಗಳು 6 ವಿಧ,---> 1. ವಿಕಾರ 2. ವಿಶ್ಲೇಷಣ 3. ವಿಕರ್ಷಣ 4. ಅಭ್ಯಾಸ 5. ವಿರಾಮ 6. ಸ್ತೋಭಾ ಪರಿಶಿಷ್ಟ 1 || ಶುಭಮಸ್ತು|| ಶ್ರೀ ಗಣಾಧಿಪತಯೇನಮಃ | ಶ್ರೀ ಶಾರದಗುರುಭ್ಯೋನಮಃ | ಶ್ರೀ ಶ್ರೀಕಂಠೇಶ್ವರಾಯನಮಃ | ಶ್ರೀ ಸಾಮಗಾಚಾರ್ಯೇಭ್ಯೋನಮಃ | || ಪರಿಭಾಷಾ|| ಹರಿಃ ಓಂ || ಸಪ್ತ ಸ್ವರೈಃ ಸಮಸ್ತಂಯೋಜಗದೇತಚ್ಚರಾಚರಂ | ಸಂಜೀವಯತಿ ವಿಶ್ವಾತ್ಮಾ ಸಮೇವಿಷ್ಣುಃ ಪ್ರಸೀದತು || ಅಥಸಾಮ್ನಾಂ ಕೃಷ್ಟ ಪ್ರಥಮ/ದ್ವಿತೀಯ/ತೃತಿಯ ಚತುರ್ಥ ಮಂದ್ರಾತಿ ಸ್ವಾರ್ಯಾಃ ಸ್ವರವತಾಂ ಪರ್ವಣಾಂ ಜ್ಞಾಪಕತ್ವೇನ ಪರಿಭಾಷಿತೈಃ ಕಕಾರಾದಿಭಿ ರಕ್ಷರೈಃ ಪರ್ವಾದಿವರ್ಣ್ಯೈಶ್ಚ ಸಾಮ್ನಾಂ ದೀಪಸ್ತಾನೀಯೋ ಗ್ರಂಥ ಅರಭ್ಯತೇ ||


ಹೆಚ್ಚಿನ ಮಾಹಿತಿಗೆ ಸರ್ಪಕಿಸಿ: ವಿದ್ವಾನ್ ರಾಮಚಂದ್ರ ಭಟ್ಟ ಎಮ್. ಎ ಸಾಮವೇದಿ ಅಧ್ಯಾಪಕರು, ಶ್ರೀ ವಿ. ಸಂಸ್ಕೃತ ಪಾಠಶಾಲಾ ಕೆಕ್ಕಾರು, ಫೋನ್: 08387-285321 / 285454 / 290383 /8762201535 / 8722454123

Start a discussion about सामवेदः/राणायनीया

Start a discussion